ಉದ್ಯೋತರಕ
	ನ್ಯಾಯಭಾಷ್ಯವಾರ್ತಿಕವೆಂಬ ಗ್ರಂಥದ ಕರ್ತೃ. ಕಾಲ ಸು. ಕ್ರಿ.ಶ. ಆರನೆಯ ಶತಮಾನ. ನ್ಯಾಯದರ್ಶನದಲ್ಲಿ ಈತನ ಹೆಸರು ಬಹು ಪ್ರಸಿದ್ಧ. ಗೌತಮ ನ್ಯಾಯಸೂತ್ರದ ಮೇಲಿನ ವಾತ್ಸ್ಯಾಯನ ಭಾಷ್ಯಕ್ಕೆ ಈತನ ಗ್ರಂಥ ವಿಮರ್ಶಾತ್ಮಕವಾದ ವ್ಯಾಖ್ಯಾನವಾಗಿದೆ. ವಾಚಸ್ಪತಿಮಿಶ್ರ ಈ ವಾರ್ತಿಕದ ಮೇಲೆ ವಾರ್ತಿಕಟೀಕಾ ಎಂಬ ವಾಖ್ಯಾನವನ್ನು ಬರೆದಿದ್ದಾನೆ. ಉದ್ಯೋತಕರ ನ್ಯಾಯದರ್ಶನದಲ್ಲಿ ಪ್ರಬಲವಾಗಿ ಚರ್ಚೆ ಮಾಡಿದವನೆಂದೂ, ನ್ಯಾಯದರ್ಶನಕ್ಕೆ ಅತ್ಯಂತ ಬಲದಾಯಕವಾದ ವಾದಗಳನ್ನು ಒದಗಿಸಿದವನೆಂದೂ ಖ್ಯಾತನಾಗಿದ್ದಾನೆ. ಇವನ ತರ್ಕ ಕೌಶಲವನ್ನು ಸೂಚಿಸುವ ರೀತಿಯಲ್ಲಿ ಬಾಣಭಟ್ಟ ತನ್ನ ಕಾದಂಬರೀ ಕಾವ್ಯದಲ್ಲಿ ಇವನ ಹೆಸರನ್ನು ಉಲ್ಲೇಖಿಸಿದ್ದಾನೆ.									     
(ಎಸ್.ಎಸ್.ಆರ್.; ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ